Sunday, November 1, 2015

ಸತ್ಯವಂತ

ವಿಶ್ವ ವಿಖ್ಯಾತ ಮುಲ್ಲಾ ನಸ್ರುದ್ದೀನ ಓರ್ವ ಸೂಫಿ ಗುರುವೆಂದೂ, ಸಂತನೆಂದೂ ಪರಿಗಣಿಸಲ್ಪಟ್ಟವನು. ತನ್ನನ್ನು ತಾನು ಸಾಮಾನ್ಯನೆಂದು ಪರಿಗಣಿಸಲ್ಪಡುವಂತೆ ತಾನೂ ಒಂದು ಪಾತ್ರಧಾರಿಯಾಗಿ ಗಂಭೀರವಾದ ಚಿಂತನೆಯನ್ನು ಸರಳ ಕತೆಯಾಗಿಸುವ ಜಾಣತನವನ್ನು ಪ್ರದರ್ಶಿಸುತ್ತಿದ್ದ.

ನ್ನ ಕಾಲದ ಕಟ್ಟಳೆಗಳನ್ನು ಮುರಿಯುವ ಆಸಕ್ತಿ ತೋರದೆ ಅವುಗಳಿಗೆ ನಿರ್ದಿಷ್ಟ ಅರ್ಥ ಇರುವಂತೆಯೇ ಬೇರೆ ಆಯಾಮಗಳನ್ನು ತೋರಿಸಿ ಜನರನ್ನು ದಂಗುಪಡಿಸುತ್ತಿದ್ದ. ಜನರು ಸತ್ಯವೆಂದು ತಿಳಿದಿರುವುದು ಸಾಂದರ್ಭಿಕ ಪರಿಸ್ಥಿತಿಯನ್ನು ಅವಲಂಬಿಸಿದೆ. ಸರಿಯಾಗಿ ಅರ್ಥವಾಗದೆ ಇದನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗದು ಎನ್ನುತ್ತಾನೆ.

ಒಮ್ಮೆ ಸಿಂಹಾಸನಾರೂಢನಾಗಿದ್ದ ಸುಲ್ತಾನ ಪದೇಪದೇ ಜನರು ಸುಳ್ಳು ಹೇಳುತ್ತಿರುವುದರ ಬಗ್ಗೆ ಬೇಸರಪಟ್ಟುಕೊಂಡು ಹೇಳಿದ. ಮುಲ್ಲಾ ಎದ್ದುನಿಂತು ‘ಖಾವಂದರೇ, ಸತ್ಯ ಎಂಬುದು ಇರುವುದು ಸತ್ಯ. ಸಾಂದರ್ಭಿಕ ಸತ್ಯವನ್ನು ಉಪಯೋಗಿಸುವ ಮೊದಲು ಜನರು ನಿಜವಾದ ಸತ್ಯವನ್ನು ಪಾಲಿಸಬೇಕು. ಆದರೆ, ಜನ ಯಾವಾಗಲೂ ಇದಕ್ಕೆ ವಿರುದ್ಧವಾಗಿ ಪ್ರಯತ್ನ ಮಾಡುತ್ತಾರೆ. ಇದರ ಪರಿಣಾಮವಾಗಿ ಮನುಜ ನಿರ್ಮಿತ ಸತ್ಯದ ಉಪಯೋಗದ ಅವಕಾಶವನ್ನು ಸದಾ ಬಯಸುತ್ತಾರೆ, ಯಾಕೆಂದರೆ ಅದು ತಮ್ಮ ಸೃಷ್ಟಿ ಎಂಬುದು ಸಹಜವಾಗಿ ಅವರಿಗೆ ತಿಳಿದಿರುತ್ತದೆ’ ಎಂದ. ಸುಲ್ತಾನನಿಗೆ ಇದು ತುಂಬ ಕ್ಲಿಷ್ಟಕರ ವಿವರಣೆ ಎಂದೆನಿಸಿತು. ‘ಒಂದು ವಿಷಯವು ಸತ್ಯ ಅಥವಾ ಸುಳ್ಳು ಮಾತ್ರವಾಗಿರುತ್ತದೆ. ನನ್ನ ಪ್ರಜೆಗಳು ಸತ್ಯವನ್ನೇ ಹೇಳಬೇಕೆಂದು ಆಜ್ಞೆ ವಿಧಿಸುತ್ತೇನೆ. ಆಗ ಜನರು ಸತ್ಯವನ್ನು ಹೇಳುವುದನ್ನು ಮುಂದೆ ಅಭ್ಯಾಸಮಾಡಿಕೊಳ್ಳುತ್ತಾರೆ’ ಎಂದ ಸುಲ್ತಾನ.

ರುದಿನ ನಗರದ ಹೆಬ್ಬಾಗಿಲು ತೆರೆದಾಗ ಒಳಗೆ ಒಂದು ವಧಾಸ್ಥಾನವನ್ನು ಮಾಡಿದ್ದರು. ಸುಲ್ತಾನನ ಆಸ್ಥಾನದ ಮುಖ್ಯ ಸರದಾರನೊಬ್ಬ ಅಲ್ಲಿ ಕೂತಿದ್ದ. ಒಬ್ಬ ಎತ್ತರದ ಧ್ವನಿಯಲ್ಲಿ ಕೂಗಿ ಹೇಳುತ್ತಿದ್ದ, ‘ಯಾರೇ ಆಗಲಿ ನಗರದ ಒಳಗೆ ಪ್ರವೇಶಿಸುವವರು ಮೊದಲು ಮುಖ್ಯ ಸರದಾರ ಕೇಳುವಂತಹ ಪ್ರಶ್ನೆಗೆ ನಿಜ ಉತ್ತರವನ್ನು ನೀಡಬೇಕು, ಸುಳ್ಳು ಹೇಳಿದಲ್ಲಿ ಮರಣದಂಡನೆಗೆ ಗುರಿಯಾಗುವರು’. ನಗರದ ಹೆಬ್ಬಾಗಿಲ ಹೊರಗೆ ಪ್ರವೇಶಿಸುವ ಸಲುವಾಗಿ ಕಾದುನಿಂತಿದ್ದ ಮುಲ್ಲಾ ನಸ್ರುದ್ದೀನ್ ಮೊದಲಿಗನಾಗಿ ಒಳಗೆ ಬಂದ. ಸರದಾರ ಕೇಳಿದ, ‘ಎಲ್ಲಿಗೆ ಹೋಗುತ್ತಿರುವೆ? ಸತ್ಯ ಹೇಳು, ಇಲ್ಲದಿದ್ದರೆ ಮರಣದಂಡನೆಗೆ ಗುರಿಯಾಗುವೆ’. ‘ನನ್ನನ್ನು ಮರಣದಂಡನೆಗೆ ಗುರಿಪಡಿಸುತ್ತಾರೆ, ನೇಣುಗಂಬದತ್ತ ಹೋಗುತ್ತಿದ್ದೇನೆ’ ಎಂದ ಮುಲ್ಲಾ ನಸ್ರುದ್ದೀನ್. ‘ನಾನು ಇದನ್ನು ನಂಬುವುದಿಲ್ಲ’ ಎಂದ ಸರದಾರ. ‘ಹಾಗಾದರೆ ಸರಿ, ನಾನು ಸುಳ್ಳು ಹೇಳಿದ್ದರೆ ನನಗೆ ಮರಣದಂಡನೆಯ ಶಿಕ್ಷೆ ನೀಡು’ ಎಂದ ಮುಲ್ಲಾ. ‘ನಾನು ಹಾಗೆ ಮಾಡಿದರೆ ನೀನು ಸತ್ಯ ನುಡಿದಂತಾಗುತ್ತದಲ್ಲಾ?’ ಎಂದ ಸರದಾರ. ‘ನಿಜ. ಇದು ಈಗ ನಿನ್ನ ಸತ್ಯ’ ಎಂದ ಮುಲ್ಲಾ ನಸ್ರುದ್ದೀನ್.

ಒಂದು ಸಂದರ್ಭದಲ್ಲಿ ಸೂಫಿ ಸಂತ ಅಬೂ ಅಲ್ ದಖ್ಖಾಕ್ ಹೀಗೆ ಹೇಳುತ್ತಾರೆ, ‘ಸತ್ಯವೆಂದರೆ ನೀವು ಇರುವ ಹಾಗೆಯೇ ಜನರೊಂದಿಗೆ ಇದ್ದು ಬಿಡುವುದು ಅಥವಾ ನೀವು ನಿಮ್ಮ ಬಗ್ಗೆ ಗ್ರಹಿಸುತ್ತಿರುವ ಹಾಗೆಯೇ ಇದ್ದು ಬಿಡವುದು.

No comments:

Post a Comment