ನಿಶ್ಚಯವಾಗಿ ಬದುಕು ಎಂಬುದು ಯಶಸ್ಸು,ಆಶಾವಾದ,ಹೋರಾಟ, ಕಾರ್ಯಕ್ಷಮತೆ,ಮತ್ತು ಪರಿಶ್ರಮದ ಮೈದಾನವಾಗಿದೆ. ಆದ್ದರಿಂದ ಕಷ್ಟ, ಸುಖ, ತೊಂದರೆ, ವಿಶಾಲತೆ, ಸಂದಿಗ್ಧತೆ ಎಲ್ಲವೂ ಈ ಬದುಕಿನ ಅವಿಭಾಜ್ಯ ಅಂಗ. ಕುರಾನಿನಲ್ಲಿ ಅಲ್ಲಾಹು ಹೇಳುತ್ತಾನೆ.
“ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವ ನಾಗಿ ಸೃಷ್ಟಿಸಿದ್ದೇವೆ”
ದುನಿಯಾದ ಕಾರುಣ್ಯಕ್ಕಿಂತ ಮಿಗಿಲಾಗಿ ತೀವ್ರತೆ ಮತ್ತು ತೀಕ್ಷ್ಣತೆಯ ಮಡಿಲಲ್ಲಿ ಸೃಷ್ಟಿಸಿದ್ದೇವೆ.
ಖಂಡಿತವಾಗಿಯೂ ಧನಾತ್ಮಕ ಮನೋಭಾವ ಬೆಳೆಸಿದ ಮನುಷ್ಯ ತನ್ನ ಬದುಕಿನಲ್ಲಿ ಏರುಪೇರು ಸಂಭವಿಸುವಾಗ ಗತಕಾಲದ ಉತ್ತಮ ಸ್ಮರಣೆಯನ್ನು ಮೆಲುಕು ಹಾಕಿ ಅದರಲ್ಲಿ ಸಂತೋಷ ಮತ್ತು ಆಶಾದಾಯಕ ಪ್ರಗತಿನ್ನು ಕಾಣುತ್ತಾನೆ. ತನ್ನ ಬದುಕಿನ ಸರ್ವಘಟ್ಟಗಳಲ್ಲೂ ಹುರುಪಿನಿಂದ ಕಾರ್ಯಚರಿಸುತ್ತಾನೆ. ಬದುಕನ್ನು ಸವಾಲಾಗಿ ಸ್ವೀಕರಿಸುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತೇಜನ ನೀಡಿದ್ದಾರೆ.
ಅಂತ್ಯ ದಿನ ಸಂಭವಿಸಿದಾಗಲೂ ನಿನ್ನ ಕೈಯಲ್ಲಿ ಸಸಿ ಇದ್ದರೆ ಅದನ್ನು ನೆಟ್ಟು ಭರವಸೆಯನ್ನು ಜೀವಂತವಾಗಿಡಲು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸುತ್ತಾರೆ.
ಬದುಕಿನ ನಿಘಂಟುವಿನಲ್ಲಿ ನಿರಾಶೆಗೆ ಅರ್ಥವಿರಬಾರದು.
ನಿಶ್ಚಯವಾಗಿಯೂ ಉತ್ತಮ ತಳಿಯ ನಾಟಿ ಸಸ್ಯಗಳನ್ನು ನೆಡುವುದರ ಮೂಲಕ ಜನರಿಗೆ,ಊರಿಗೆ ಎಲ್ಲರಿಗೂ ಉಪಕಾರವಾಗುವ ಆಶಾದಾಯಕ ಪ್ರಯತ್ನಕ್ಕೆ ಕೈಹಾಕಬೇಕು ಅದು ಅಂತ್ಯದಿನದ ಸನಿಹದಲ್ಲಾದರೂ ಸರಿ!
ಧನಾತ್ಮಕ, ಸಕಾರಾತ್ಮಕ ಮನುಷ್ಯನಾಗಿ ಬಾಳಬೇಕಾದರೆ ಉತ್ತಮವಾದ ಪ್ರಾಯೋಗಿಕ ಗುಣಗಳನ್ನು ಮತ್ತು ಉದಾತ್ತ ಕೌಶಲ್ಯಗಳನ್ನು ಸ್ವಾದೀನಗೊಳಿಸಬೇಕು. ಒತ್ತಡಗಳನ್ನು ಜಯಿಸುವ ಮನೋಧೈರ್ಯವನ್ನು ಸಂಪಾದಿಸಬೇಕು. ಪ್ರಕಾಶಮಾನವಾದ ಭವಿಷ್ಯಕ್ಕಾಗಿ ಉತ್ತಮವಾದ ಒಡನಾಟವನ್ನು ತನ್ನದಾಗಿಸಬೇಕು. ನಕರಾತ್ಮಕ ಗುಣಗಳಿಂದ ದೂರಸರಿಯಬೇಕು.
ಅದೇ ರೀತಿ ಧನಾತ್ಮಕ ಮನೋಭಾವ ಪಡೆಯಬೇಕಾದರೆ ಒಳಿತಿಗೆ ತಡೆಯೊಡ್ಡುವ ಕಪಟವೇಷದಾರಿಗಳ ಹತಾಶೆಯ ಮಾತುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು. ನಕರಾತ್ಮಕ ದಾರಿಗೆ ಕರೆದೊಯ್ಯುವವರನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ದೂಷಿಸಿದ್ದಾರೆ.
ಜನರೆಲ್ಲರೂ ನಾಶ ಹೊಂದಿದರೆಂಬ ಹತಾಶೆಯ ನುಡಿಯನ್ನು ಹೇಳಿದ ವ್ಯಕ್ತಿಯೊಬ್ಬನ ಕುರಿತು ನೆಬಿಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
“ಅವನು ಅವರನ್ನು ನಾಶಗೊಳಿಸಿದನು”
ಅಂದರೆ ಅಲ್ಲಾಹನ ವಿಶಾಲವಾದ ರಹ್ಮತ್ತ್ ಬಗ್ಗೆ ಅವರಿಗಿರುವ ಭರವಸೆಯ ಸೆಲೆಯನ್ನೇ ಬತ್ತಿಸಿದನು. ಮಾತ್ರವಲ್ಲ ಅಲ್ಲಾಹನ ಮಗ್ಫಿರತ್ ನ ಕುರಿತು ಅವರಿಗಿರುವ ಆಶಾದಾಯಕ ಮನಸ್ಥಿತಿಯನ್ನೇ ಕಿತ್ತೆಸೆದುಬಿಟ್ಟನು!
ಧನಾತ್ಮಕವಾಗಿ ಬದುಕನ್ನು ಕೊಂಡೊಯ್ಯುವ ಧೀರರ ಜತೆ ಸಹವಾಸ ಮಾಡುವುದು ದೃಢಚಿತ್ತತೆ ಸಂಪಾದಿಸಲು ಸಹಾಯಕವಾಗುವುದು. ಯಾವುದೇ ವಿಷಯಗಳನ್ನು ಸಕರಾತ್ಮಕವಾಗಿ ಸಮೀಪಿಸುವ ಪಕ್ವತೆ ಮೂಡಿಬರುತ್ತದೆ.
ತನ್ನ ಮಹಾತ್ವಕಾಂಕ್ಷೆಗಳನ್ನು ಅಡೆತಡೆಯಿಲ್ಲದೆ ಪೊರೈಸಲು ಅದು ನಿಮಿತ್ತವಾಗುವುದು.
ಓ ದಾಸರೇ…
ಜಟಿಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಬದುಕು ಬರಡಾದ ಸಮಯದಲ್ಲಿ ಅಸಾಧಾರಣ ಮನೋಧೈರ್ಯದೊಂದಿಗೆ ಮುನ್ನುಗ್ಗಿ ಬದುಕನ್ನು ಸವಾಲಾಗಿ ತೆಗೆಯುವ ಧನಾತ್ಮಕ ಅಂಶ ಅದೆಷ್ಟು ಸುಂದರ ಮತ್ತು ಮಾದರಿಯುತ!
ತನ್ನ ಉದಾತ್ತ ಗುರಿಗಳನ್ನು ಸಾಧಿಸಲು ಧನಾತ್ಮಕ ಅರ್ಥದಲ್ಲಿ ಮನುಷ್ಯನು ತನ್ನ ಬದುಕನ್ನು ಕ್ರಮೀಕರಿಸಿಕೊಂಡು, ಚಿತ್ತವನ್ನು ನಿರ್ಮಲವಾಗಿಸುವಂತೆ ಕುರಾನ್ ಉತ್ತೇಜನ ನೀಡುತ್ತದೆ.
ಕುರಾನ್ ಹೇಳುತ್ತದೆ
“ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು”
(ಅಶ್ಶಂಸ್ 09)
ಅಂದರೆ ಅಲ್ಲಾಹನಿಗೆ ಅನುಸರಿಸುವ ಮೂಲಕ ಕೆಡುಕುಗಳಿಂದ ಶುಧ್ಧೀಕರಿಸಿ ನಿರ್ಮಲವಾಗಿಸಬೇಕು.
ಧನಾತ್ಮಕ ಅಂಶ ಸವಾಲುಗಳನ್ನು ಮೆಟ್ಟಿ ನಿಲ್ಲಲು ಉತ್ತೇಜನ ನೀಡುತ್ತದೆ.ಅಲ್ಲಿ ಕಷ್ಟಕಾರ್ಪಣ್ಯಗಳಿಗೆ ಸ್ಥಾನವಿರುವುದಿಲ್ಲ. ಕೊರತೆ ವೈಫಲ್ಯತೆ, ವಿಕಲಾಂಗಕ್ಕೆ ಜಾಗ ಇರುವುದಿಲ್ಲ. ಜೀವನವನ್ನು ಛಾಲೆಂಜಾಗಿ ಪರಿವರ್ತಿಸಿ ಕೊನೆಯಲ್ಲಿ ಅಭೂತಪೂರ್ವ ವಿಜಯವನ್ನು ಕೊಯ್ಯಲಿಕ್ಕೆ ಸಾದ್ಯವಾಗುತ್ತದೆ.
ಮಹಾನರಾದ ಇಮಾಮ್ ತುರ್ಮದ್ಸಿ (ರ) ತನ್ನ ಕಣ್ಣಿಗೆ ಭಾಧಿಸಿದ ಕುರುಡುತನವನ್ನು ಧನಾತ್ಮಕವಾಗಿ ಸ್ವೀಕರಿಸಿ ಅತ್ಯಂತ ಶ್ರಮಜೀವಿಯಾಗಿ ಬದುಕಲು ಪ್ರಯತ್ನಿಸಿದರ ಫಲವಾಗಿ ಅವರು ಜಗತ್ಪ್ರಸಿದ್ದ ದಿಗ್ಗಜ ಹದೀಸ್ ವಿದ್ವಾಂಸರ ಪಟ್ಟಿಯಲ್ಲಿ ತನ್ನ ಹೆಸರನ್ನು ಅಮರವಾಗಿಸಿದರು!
ತನ್ನ ಸಾಧನೆಗೆ ಅಂಗವೈಕಲ್ಯ ಬೃಹತ್ ತಡೆಗೋಡೆಯಾಗಿ ನಿಂತಿದ್ದರೂ ಅವರು ಹತಾಶರಾಗಲಿಲ್ಲ. ಬದುಕನ್ನು ಸವಾಲಾಗಿ ಸ್ವೀಕರಿಸಿ ಧನಾತ್ಮಕ ಮೂಲಕ ಎಲ್ಲಾ ಕೊರತೆಗಳನ್ನು ಮೆಟ್ಟಿನಿಂತು ಜಗತ್ತೇ ಗುರುತಿಸುವ ಅತೀ ದೊಡ್ಡ ಹದೀಸ್ ವಿದ್ವಾಂಸರಾಗಿ ಅರಾಜಮಾನರಾದರು!
ಉತ್ತಮವಾದ ಮತ್ತು ಸಂಪೂರ್ಣವಾದ ವಿಷಯಗಳನ್ನು ಕೇಳುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಸಹಾಬಿಗಳನ್ನು ಪ್ರೇರಿಪಿಸುತ್ತಿದ್ದರು. ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
“ನೀವು ಅಲ್ಲಾಹನಲ್ಲಿ ಬೇಡುವುದಾದರೆ ‘ಫಿರ್ದೌಸ್’ ನ್ನು ಬೇಡಿರಿ.ನಿಶ್ಚಯವಾಗಿಯೂ ‘ಫಿರ್ದೌಸ್’ ಸ್ವರ್ಗದ ಮಧ್ಯ ಮತ್ತು ಅತೀ ಉನ್ನತ ಸ್ಥಳವಾಗಿದೆ”
(ಹದೀಸ್ ಬುಖಾರಿ)
ಓ ನಮಾಜು ನಿರ್ವಹಿಸುವವರೇ…
ಖಂಡಿತವಾಗಿಯೂ ಸಮಸ್ಯೆಗಳಿಗೆ ಉತ್ತಮ ಪರಿಹಾರ ಧನಾತ್ಮಕ ವ್ಯವಹಾರಗಳಿಂದಾಗಿದೆ. ಅದೇ ರೀತಿ ಇತರರ ತಪ್ಪುಗಳನ್ನು ತಿಳಿದುಕೊಂಡು ಹಿತಕರವಾದ ಉಪದೇಶಗಳನ್ನು ನೀಡುವ ಮೂಲಕ ಜನರಿಗೆ ಹಿತವನ್ನು ಬಯಸುವುದರ ಮೂಲಕವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಉತ್ತಮವಾದ ಕಾರ್ಯಗಳತ್ತ ಗಮನಸೆಳೆಯುವಂತೆ ಮಾಡಬೇಕು. ಮೆರತವನಿಗೆ ನೆನಪಿಸಬೇಕು. ವಿವರವಿಲ್ಲದವನಿಗೆ ಸುಜ್ಞಾನ ನೀಡಬೇಕು. ಇದಾಗಿದೆ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಸಹಾಬಿಗಳಿಗೆ ಕಲಿಸಿಕೊಟ್ಟ ರೀತಿ.
ಅಬ್ಬಾದ್ ಬಿನ್ ಶುರಹ್’ಬೀಲ್ (ರ) ಹೇಳುತ್ತಾರೆ. ನಾನೊಬ್ಬ ಫಕೀರ, ನನಗೆ ವಿಪರೀತವಾಗಿ ಹಸಿವಾಗಿತ್ತು. ಹಾಗೆ ನಾನು ಮದೀನಾದ ಒಂದು ತೋಟಕ್ಕೆ ಪ್ರವೇಶಿಸಿ, ಒಂದು ಗೊನೆಯನ್ನು ಸೀಳಿ ಅದರಿಂದ ತಿಂದೆ. ಕೆಲವೊಂದನ್ನು ನನ್ನ ವಸ್ತ್ರ ದಲ್ಲಿ ಹಾಕಿ ಹೋಗಲು ಅಣಿಯಾದಾಗ ತೋಟದ ಮಾಲಿಕ ಬಂದು ನನಗೆ ಹೊಡೆದ. ನನ್ನ ವಸ್ತ್ರವನ್ನು ಹಿಡಿದೆಳದ! ನಂತರ ನನ್ನನ್ನು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಸನ್ನಿಧಿಯಲ್ಲಿ ಹಾಜರುಪಡಿಸಿದ. ಆಗ ಅವರ ಹತ್ತಿರ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
“ಅಜ್ಞಾನಿಯಾದ ಒಬ್ಬನಿಗೆ ನಿನೇಕೆ ಜ್ಞಾನ ನೀಡಲಿಲ್ಲ, ಹಸಿವಿನಿಂದ ಕಂಗೆಟ್ಟವನಿಗೆ ನೀನು ಆಹಾರ ನೀಡಿದ್ದೂ ಇಲ್ಲ”
ನಕರಾತ್ಮಕವಾಗಿ ಶಿಕ್ಷೆ ನೀಡುವುದನ್ನು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿರೋಧಿಸಿದ್ದಾರೆ. ಆಶಾವಾದ ಮತ್ತು ಧನಾತ್ಮಕವಾದ ಕಾರ್ಯ ಪೃವರ್ತಿಸುವಂತೆ ಉಪದೇಶಿಸಿದರು.
ಧನಾತ್ಮಕ ಬೆಳವಣಿಗೆಗೊಳಪಟ್ಟ ವಿಷಯವಾಗಿದೆ, ಮನುಷ್ಯನು ಉತ್ತಮವಾದ ಮಾತುಗಳ ಮೂಲಕ ಆಶಾವಾದಿ ವಿಚಾರಗಳನ್ನು ವಿನಿಮಯಮಾಡಬೇಕು. ತನ್ನ ಮಾತಿಗೆ ತೂಕವಿರಬೇಕು. ಅದು ತನಗೆ ಮತ್ತು ಇತರರಿಗೆ ಒಳಿತು ನೀಡುತ್ತದೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
“ಉತ್ತಮ ಮಾತು ಸದಕವಾಗಿದೆ”
ಓ ಅಲ್ಲಾಹನ ದಾಸರೇ…
ಮನುಷ್ಯನು ತನ್ನ ಒಡನಾಟವನ್ನು ಉತ್ತಮಗೊಳಿಸುವುದರ ಮೂಲಕ ಎಲ್ಲರ ಗಮನಸೆಳೆಯಬೇಕು. ಜನರನ್ನು ಬೇಟಿಯಾಗುವಾಗ ಮುಗುಳ್ನಗೆ ಮತ್ತು ಸಂತೋಷ ನಿನ್ನ ಮುಖದಲ್ಲಿರಬೇಕು. ನಿನ್ನ ಮುಗುಳ್ನಗೆ ಜನರಿಗೆ ಅದೆಷ್ಟೋ ದೊಡ್ಡ ಸಮಾದಾನವನ್ನು ನೀಡುತ್ತದೆ. ಜನರನ್ನು ದನಾತ್ಮಕವಾಗಿ ಚಿಂತಿಸಲು ಪ್ರೇರಿಪಿಸಬೇಕು. ಜಟಿಲ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಅಂಡೆಲೆಯುವ, ಸಂಕಷ್ಟಗಳನ್ನು ಎದುರಿಸುವ, ರೋಗಿಯಾಗಿ ಮನೋವ್ಯಥೆಯಿಂದ ದಿನದೂಡುವ ಜನರೊಂದಿಗೆ ಸಂತೋಷವನ್ನು ಹಚ್ಚಿ ಅವರಲ್ಲಿ ಭರವಸೆ ಮೂಡಿಸಬೇಕು.
ರೋಗಪೀಡಿತನಾಗಿ ಕಳೆಯುವ ಒಬ್ಬರನ್ನು ಬೇಟಿಯಾದ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
“ನೀನು ಸಂತುಷ್ಠನಾಗಿರು! ಅಲ್ಲಾಹು ಹೇಳುತ್ತಾನೆ, ಸತ್ಯವಿಶ್ವಾಸಿಯಾದ ನನ್ನ ದಾಸನಿಗೆ ಪರಲೋಕದ ನರಕದಲ್ಲಿ ಸಿಗಲಿರುವ ಅಗ್ನಿಗೆ ಪರಿಹಾರವಾಗಿದೆ ದುನಿಯಾದ ಈ ರೋಗವೆಂಬ ಅಗ್ನಿ!”
ಪ್ರವಾದಿಯವರ ಧನಾತ್ಮಕತೆಗೆ ಪ್ರಚೋದನೆ ನೀಡುವ ಶ್ರೇಷ್ಠ ಮಾತಿನಿಂದಾಗಿ ರೋಗಿ ತನ್ನ ಎಲ್ಲಾ ನೋವಿಗೆ ಆ ಮಾತಿನ ಮೂಲಕ ಪರಿಹಾರ ಕಾಣುತ್ತಾನೆ!
ಮುತ್ತು ನೆಬಿಯವರ ನುಡಿಮುತ್ತಿನ ಕಾರಣದಿಂದ ತನ್ನ ನೋವನ್ನು ಮರೆಯುತ್ತಾನೆ.
ಪತಿ ಪತ್ನಿಯರು ಪರಸ್ಪರ ಧನಾತ್ಮಕವಾಗಿ ವಿಚಾರ ವಿನಿಮಯ ಮಾಡಬೇಕು. ಅದು ಅವರಲ್ಲಿರುವ ಪ್ರೀತಿ ವಿಶ್ವಾಸವನ್ನು ಗಟ್ಟಿ ಮಾಡುತ್ತದೆ. ಹಿರಿಯರು ತಮ್ಮ ಬದುಕಿನಲ್ಲಿ ಎದುರಿಸಬೇಕಾಗಿ ಬಂದ ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಜಯಿಸಿದ ಅನುಭವಗಳನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಿಕೊಡಬೇಕು. ಅದು ಅವರಿಗೆ ಬದುಕನ್ನು ಧನಾತ್ಮಕವಾಗಿ ಎದುರಿಸಲು ಮತ್ತು ಸ್ವಭಾವ ಮಹಿಮೆ ಹಾಗೂ ಸಂಸ್ಕೃತಿಯನ್ನು ಉತ್ತಮಗೊಳಿಸಲು ಸಹಾಯಕವಾಗುತ್ತದೆ.
ಅಲ್ಲಾಹು ಬದುಕಿನುದ್ದಕ್ಕೂ ಧನಾತ್ಕಕವಾಗಿ ಕಾರ್ಯಚರಿಸಲು ನಮಗೆ ತೌಫೀಕ್ ನೀಡಲಿ. ಉತ್ತಮ ಕಾರ್ಯಗಳನ್ನು ಜೀವನದಲ್ಲಿ ಅಳವಡಿಸಲು ಅಲ್ಲಾಹು ತೌಫೀಕ್ ನೀಡಲಿ.
ರಾಷ್ಟ್ರ ಪಿತ ಶೈಖ್ ಝಾಈದ್ ರವರ ಪರಲೋಕ ಅಲ್ಲಾಹು ಪ್ರಕಾಶಮಯವಾಗಿಸಲಿ. ಆಮೀನ್.
ಸರ್ವ ವಿಶ್ವಾಸಿ ವಿಶ್ವಾಸಿನಿಗಳಿಗೆ ಅಲ್ಲಾಹು ಮಗ್ಫಿರತ್ ನೀಡಿ ಅನುಗ್ರಹಿಸಲಿ ಆಮೀನ್.
-ಸೆಪ್ಟೆಂಬರ್23 ರ ಯುಎಇ ಜುಮಾ ಖುತುಬಾ
ಕೃಪೆ: ವಿಶ್ವ ಕನ್ನಡಿಗ ನ್ಯೂಸ್.
What happens when a gambler hits the jackpot at a casino? - Dr
ReplyDeleteThe payout is up and running, so 수원 출장마사지 the 나주 출장마사지 gambler is penalized for 광명 출장안마 losing what's rightfully 포천 출장마사지 referred to 평택 출장마사지 as a bonus offer. · When the bonus is